ಬುಧವಾರ, ಫೆಬ್ರವರಿ 18, 2009

ಮರಳೋ ಮರಳು...

ವಾಯು ದೇವನಿಗೇಕೂ ಮುನಿಸು
ಅರಬಿ ನಾಡೆಲ್ಲ ಮರಳಿನ ಮುಸುಕು

ಕಣ್ಣು ಬಿಟ್ಟರೆ ತುಂಬಿತು
ಬಾಯ್ ಬಿಟ್ಟರೆ ಮುಗಿಯಿತು

ವಾಹನಗಳಿಗೆ ಧೂಳೇ ಬಂಗಾರ
ಚಿನ್ನದ ಲೇಪನ ಅದಕೆ ಸಿಂಗಾರ

ವೈದ್ಯರಿಗೆ ಮುಗಿಬೀಳೊರು ಹೆಚ್ಚು
ಖರ್ಚು ನೋಡಿ ಬರಿಸಿದೆ ಹುಚ್ಚು

ಬೆಂಗಳೂರ ವಾಯುಮಾಲಿನ್ಯ
ಮರಳಿನ ಭುಗಿಲೆದ್ದ ಚೈತನ್ಯ
ಎಲ್ಲವೊ ಒಂದೇ ಅಲ್ಲವೇ

ಪರದೇಶ ಹೊಗಳೊ ಭಟರು
ತವರೂರ ತೆಗಳೊ ನೆಂಟರು

ಮರಳು ಮೂಡಿಸಿತೆ ಅರಿವು..
ತಿಳಿದಿರಬೇಕಲ್ಲವೇ ನನ್ನ ನಿಲುವು...

ಮರಳ ಆರ್ಭಟದ ಛಾಯೆ
ನಮಗೇನೋ ಮಾಯೆ

ಭುಗಿಲೆದ್ದ ಮರಳ ಸಿರಿ
ನೆನಪಿಸಿದೆ ನನ್ನೊರ

ಮರಳ ದೂಡಿ ಓಡಬೇಕು
ತಾಯ್ನಾಡ ಮಡಿಲ ಸೇರಬೇಕು..

ತವಕದಿ ಎನ್ನ ಹೃದಯ
ಸೇರುವಾಸೆ ತವರುಮನೆಯ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ