ಭಾನುವಾರ, ಜನವರಿ 11, 2009

ಹರೆಯದ ಬಾಲೆ ಹೆದರಿ ನೀರಾದದ್ದು....

ನಾನೇ ಕಾಲ್ಪನಿಕ ಇನ್ನು ನಾನು ಬರೆದಿರುವುದು ಕಾಲ್ಪನಿಕ......... ಯಾರು ನಿಮ್ಮ ನೀವೇ ಹೋಲಿಸಿಕೊಳ್ಳಬೇಡಿ........


ಆಗ ತಾನೆ ಅವಳು ಎಸ್ ಎಸ್ ಎಲ್ ಸಿ ಮುಗಿಸಿ ತನ್ನ ವಿದ್ಯಾಭ್ಯಾಸವನ್ನು ಡಿಪ್ಲೊಮ ಮಾಡಲು ಪಾಲಿಟೆಕ್ನಿಕ್ ಗೆ ಸೇರುತ್ತಾಳೆ.... ಅವಳು ಎಸ್ ಎಲ್ ಎಲ್ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಕಾರಣ ಅವಳಿಗೆ ೧೧ ವಿಷಯಗಳಲ್ಲಿ ಪರಿಣತೆ ಪಡೆಯುವುದು ಬಹಳ ಕಷ್ಟಕರ ಆದರೊ ತನ್ನ ವಿದ್ಯೆಯಲ್ಲಿನ ಧ್ಯೆಯ ಮಾತ್ರ ಬಿಡಲಿಲ್ಲ..... ಆ ಕಾಲೇಜಿಗೆ ಸೇರಿದ ನಂತರ ಅವಳಿಗೆ ಅರಿವಾದದ್ದು ಅಲ್ಲಿ ಹುಡುಗಿಯರು ಇಲ್ಲವೆಂದು ಇವಳು ಇದ್ದ ಬ್ರಾಂಜ್ ನಲ್ಲಿ(ಎಲೆಕ್ಟ್ರಾನಿಕ್ಸ್) ಮೂದ ಮೂದಲು ಬಲು ಕಷ್ಟಪಟ್ಟೆ ಕಾಲೇಜಿಗೆ ಹೋಗುತಿದ್ದಳು ಇನ್ನು ನನಗೆ ಇಷ್ಟವಿಲ್ಲವೆಂದರೆ ಮನೆಯಲ್ಲಿ ಏನು ಹೇಳುತ್ತಾರೊ, ಏನೊ ಎಂದು ಅವಳು ತನ್ನ ಎಲ್ಲಾ ಬೇಸರ ಬದಿಗಿಟ್ಟಳು...... ೨೫ ಜನ ಗಂಡು ಹುಡುಗರು ಅವರಲ್ಲಿ ಇವಳು ಒಬ್ಬಳೇ ಹೆಣ್ಣು ಮಗಳು, ಓಹ್ ಅವಳು ಕಾಲೇಜ್ ಗೆ ಹೋದ ದಿನಗಳನ್ನು ಹೇಗೆ ಕಳೆದಳೊ ತಿಳಿಯದು... ಮೂದಲೇ ಅವಳಿಗೆ ಹುಡುಗರೊಂದಿಗೆ ಓದಿದ್ದು ನೆನಪೇ ಇಲ್ಲ ಎಲ್ಲ ಶಾಲೆಯಲ್ಲಿ ಹೆಣ್ಣುಮಕ್ಕಳೆ ಇದ್ದವರು ಇನ್ನು ಕಾಲೇಜಿನಲಿದ್ದ ಹುಡುಗರ ಬಗ್ಗೆ ಎಷ್ಟರಮಟ್ಟಿಗೆ ಅರಿಯಬಲ್ಲಳು....

ಕಾಲೇಜಿನಲ್ಲಿ ಮೊದಲ ಸಾಲಿನಲ್ಲೇ ಕುಳಿತು ಅದು ಬಾಗಿಲಿಗೆ ಬಲು ಹತ್ತಿರಕ್ಕೆ ಆಸೀನಳಾಗುತಿದ್ದಳು ಕಾರಣ ಕೊನೆಯಲ್ಲಿ ಬೇಗನೆ ಹೊರಗೆ ಹೋಗಬಹುದೆಂದು... ಅವಳಿಗೆ ತರಗತಿಯಲ್ಲಿ ಅರ್ಥವಾಗದ್ದನ್ನು ಮನಬಿಚ್ಚಿ ಕೇಳಲು ಇಂಗ್ಲೀಷ್ ಎಂಬ ಭೂತದ ಕಾಟ ಹೇಗೊ ತನಗೆ ತಿಳಿದೆಲ್ಲಾ ಸಾಹಸದಿಂದ ಓದಿನೆಡೆಗೆ ವಾಲಬೇಕಾಯಿತು.....
ಓದುವುದು ಹಾಗಿರಲಿ ಬನ್ನಿ ಈ ಪುಕ್ಕಲು ಹುಡುಗಿ ಏನೆಲ್ಲಾ ಆವಾಂತರ ಪಟ್ಟಿದ್ದಾಳೆಂದು... ಮೂದಲೇ ಹೇಳಿದ ಹಾಗೆ ಇವಳು ಒಬ್ಬಳೆ ಆ ಕ್ಲಾಸಿನಲ್ಲಿದಿದ್ದು..... ಇನ್ನು ಹುಡುಗರು ಹೆಚ್ಚು ಯಾರು ಎಷ್ಟು ಇವಳನ್ನು ಹಿಂಬಾಲಿಸುತ್ತಿದ್ದರೊ, ಹೋಗಳುತಿದ್ದರೊ, ತೆಗಳುತಿದ್ದರೊ ತಿಳಿಯದು ...... ಆದರು ಒಮ್ಮೆ ಒಬ್ಬ ಹುಡುಗ ತನ್ನ ಹಿಂಬದಿಯೇ ಕುಳಿತಿದ್ದ ಅವನು ಒಮ್ಮೆ ಇವಳನ್ನು ಯಾವುದೊ ಒಂದು ನೋಟ್ಸ್ ಬಗ್ಗೆ ಕೇಳಿ ಮರಳಿ ಕೋಡುವುದಾಗಿ ಹೇಳಿ ತೆಗೆದುಕೊಂಡು ಹೋಗಿದ್ದ ಒಂದೆರಡು ದಿನಗಳ ಬಳಿಕ ಮರಳಿ ಅವಳಿಗೆ ತಲುಪಿಸಿದ್ದ ಕೊಡ.........ಅದೇ ಮೂದಲು ಒಬ್ಬ ಹುಡುಗನಲ್ಲಿ ಮಾತಾಡಿದ್ದು ಅಲ್ಲದೆ ಅವನ ಹೆಸರು ಸುರೇಶ್ ಎಂದು ತಿಳಿದಿದ್ದು... ಮತ್ತೊಮ್ಮೆ ನೋಟ್ಸ್ ಕೇಳಿದ ಇವಳು ಕೊಡಲಿಲ್ಲ ಅಲ್ಲಿಗೆ ಮುಗಿಯಿತು ಮತ್ತೆ ಮಾತು ಕತೆ ಇಲ್ಲ ಅವರಿಬ್ಬರಲ್ಲಿ......ಅಷ್ಟೇ ಅಲ್ಲಿಗೆ ಮುಗಿಯಿತು....!!!

ಒಂದು ದಿನ ಕಾಲೇಜ್ ಮುಗಿದ ನಂತರ ಬಸ್ ಸ್ಟಾಪ್ ಗೆ ಹೋಗುತಿದ್ದಳು.. ಅವಳ ಜೊತೆಯಲ್ಲಿ ಬೇರೆ ಬ್ರಾಂಜಿನ ಹುಡುಗಿ ಕೂಡ ಜೊತೆಯಲಿದ್ದಳು.....ಹಿಂದಿನಿಂದ ಸೈಕಲ್ ಏರಿ ಬಂದ ಈ ಸುರೇಶ ಬರಬರುತ್ತ ಅವಳಲ್ಲಿಗೆ ಹೋಗಿ ಒಂದು ಪತ್ರ ತೆಗೆದು ಕೊಟ್ಟ ಆಗಲೇ ಇವಳಿಗೆ ಎಲ್ಲವು ಅಲ್ಲೇ ಆಗೋ ಪರಿಸ್ಥಿತಿ ಏನು ಇವನು ಏನೋ ಕೊಡುತಿದ್ದಾನೆ ಏನಿರಬೇಕು ಪ್ರೇಮಪತ್ರವೇ........? ಒಂದು ಹುಡುಗ ಪತ್ರ ಕೊಟ್ಟ ಎಂದರೇ ಅದೇ ಇರಬೇಕು..... ಎಂಬ ಅನುಮಾನ, ಏಕೆಂದರೆ ಚಲನಚಿತ್ರಗಳನ್ನು ನೋಡಿದ್ದ ಅವಳು ಎಲ್ಲವೊ ಊಹಿಸಿವಷ್ಟು ಸಮರ್ಥಳು ಹಾಗಂತ ಏನು ತಿಳಿಯದಿರಲೇನು ಮುಗ್ಧಳೇನಲ್ಲ......... ಅದು ಹಾಗಿರಲಿ ಇಲ್ಲಿ ಬನ್ನಿ ಮಧ್ಯರೋಡಿನಲ್ಲಿ ಅವನು ಇದ್ದಕಿದ್ದ ಹಾಗೆ ಪತ್ರ ಕೊಟ್ಟನೆಂದು ಕಣ್ಣಲ್ಲಿ ನೀರು ಭಯದ ಚಾಯೇ ಎಲ್ಲವು ಅವಳ ಮುಖದಲ್ಲಿ ಮೊಡಿತ್ತು......... ಸರಿ ಆ ಪತ್ರ ತಟ್ಟನೆ ಅವಳ ಕೈಗೆ ಕೊಟ್ಟವ... ಏಲ್ಲೊ ಮಂಗಮಾಯವಾದ....... ನಡುಗುತ್ತಲೆ ಹೋದ ಇವಳು ಅಲ್ಲೇ ನಿಂತಿದ್ದ ಜೊತೆಗಾತಿ ಕೇಳಿದಳು ಏನದು ಯಾಕೆ ಇಷ್ಟು ನಡುಗುತ್ತಿ ಎಂದಳು ಅಯ್ಯೋ ನೋಡೆ ಇದೇನೊ ಅವನು ಕೊಟ್ಟ ಎಂದ ತಕ್ಷಣ ಅವಳು ನನ್ನ ಕೈಯಿಂದ ಕಿಸಿದು ಆ ಪತ್ರ ಓದಿದಳು ಅವಳು ಹೇಳಿದಳು ನೋಡು ಇವನು ನಿನ್ನ ಪ್ರೀತಿಸ್ ತಾನಂತೆ .... ಬೇಗ ಉತ್ತರ ಹೇಳಬೇಕಂತೆ ಎಂದಳು........ಆಗಲೇ ಅವಳಲ್ಲಿ ಧಸಕೆಂದು ಜೀವ ತಣ್ಣಗಾಯಿತು... ಇನ್ನು ಈ ಪತ್ರ ಮನೆಗೆ ಹೊಯ್ದರೆ ಮನೆಯಲ್ಲಿ ಗೊತ್ತಾದರೇ ಏನು ಗತಿ ಎಂದು ಯೋಚಿಸಿ ತಕ್ಷಣ ಆ ಪತ್ರ ಹರಿದು ಬಿಸಾಕಿದಳು....... ಅಷ್ಟರಲ್ಲಿ ಆ ಸ್ನೇಹಿತೆ ಹೆದರಬೇಡ ನಾನು ನನ್ನ ಅಣ್ಣಂಗೆ ಹೇಳ್ತೀನಿ ಅಂದಳು ಅವಳ ಅಣ್ಣ ಕೂಡ ಅದೆ ಕಾಲೇಜಿನಲಿದ್ದನು... ಓಹ್ ಇನ್ನು ಅವನಿಗೇಳಿ ಇನ್ನೇನು ರಾಧ್ದಾಂತವಾಗುತ್ತೋ ತಂದೆ ಎಂದು ದೇವರಿಗೆ ಮೂರೆಹೋದಳು........ಆಹ ....... ಇಷ್ಟು ನೆಡೆಯುತ್ತಿದ್ದ ಹಾಗೆ ಬಸ್ಸ್ ಬಂದು ನಿಂತಿತು ಅದು ಬಂದ ಅರಿವು ಅವಳಗಿರಲಿಲ್ಲ ಅವಳ ಗೆಳತಿಯಿಂದ ಕರೆಬಂದಾಗಲೇ ಅವಳು ಯಾವುದೋ ಲೋಕದಿಂದ ಬಂದಂತೆ ಕಂಡಳು........ ಇನ್ನು ಬಸ್ಸ್ ಏರಿದ ನಂತರ ಮಾತಿಲ್ಲ ಕತೆಯಿಲ್ಲ.. ಮೌನದಿ ಸಾಗಿತು ಅವಳ ಸ್ಟಾಪ್ ಬರೊವರೆಗು...........

ಅವಳು ಬಸ್ ಇಳಿದು ತನ್ನ ಮನೆಕಡೆ ಹೋಗಲು ಇನ್ನೆನು ರಸ್ತೆ ದಾಟಲು ಆಕಡೆ ಈ ಕಡೆ ನೋಡುತ್ತಾಳೆ ಅಲ್ಲೇ ಪ್ರತ್ಯಕ್ಷ ಆ ಸುರೇಶ್ ಓಹ್ ಇವನೇನು ಮತ್ತೆ ಬಂದಿದಾನಲ್ಲಪ್ಪ ಎಂದು ಎದೆಯುಸಿರು ಬಿಡುತ್ತ ತನ್ನ ಮನೆ ಕಡೆಗೆ ಓಟ ಕಿತ್ತಳು.. ಮನೆ ತಲುಪಿದ್ದೇ ತಡ ಅವಳ ಆ ಭಯ ಹೃದಯ ಬಡಿತ ನಿಲ್ಲದೆ ಡವಗುಡುತಿತ್ತು........ಮನೆ ಹೊಕ್ಕುತಿದ್ದ ಹಾಗೆ ಮನೆಗೆ ಬಂದಿದ್ದ ನೆಂಟರನ್ನು ಗಮನಿಸದೆ, ಒಂದು ಮಾತು ಕೂಡ ಆಡದೆ ನೇರವಾಗಿ ತನ್ನ ರೂಮಿಗೇ ಹೋಗಿ ಬಾಗುಲು ಜಡಿದಳು.... ಒಂದೆಸಮನೇ ಅಳುತ್ತ ನಾನೇನು ಪಾಪ ಮಾಡಿದೆ ಸ್ವಾಮಿ ನನಗೆ ಏಕೆ ಈ ರೀತಿ ಕಷ್ಟ ಕೊಡುತ್ತಿ ನಾನೇ ಸಿಗಬೇಕಾ.....ಹಾಗೆ ಹೀಗೆ ದೇವರನ್ನು ಶಪಿಸುತ್ತ ಒಮ್ಮೊಮ್ಮೆ ಬೇಡುತ್ತ ಹಾಗೆ ಹಾಸಿಗೆ ಮೇಲೆ ಮೈಚಲ್ಲಿದಳು... ಇತ್ತ ಅವರಮ್ಮನಿಗೆ ಗಾಬರಿ ನಗುನಗುತ್ತ ಬರುತಿದ್ದ ಇವಳಿಗೇನಾಯಿತು..ಬಾಗಿಲು ತಟ್ಟುತ್ತ ಏಕೆ ಏನಾಯಿತು ಮನೆಯಲ್ಲಿ ಬಂದಿರುವ ನಿನ್ನ ಮಾವಂದಿರನ್ನು ಮಾತನಾಡಿಸದೆ ಏಕೆ ಹಾಗೆ ಹೋರಟು ಹೋದೆ.. ಬಾ ಬೇಗ ಎಂದರು ಅವಳು ಅಲ್ಲಿಂದನೇ ಅಮ್ಮ ನನಗೆ ತುಂಬಾ ತಲೆ ನೋವು ನಾ ಮಲಗುವೇ ಆನಂತರ ಊಟ, ಮಾತು ಎಲ್ಲ ಎಂದು ಸುಮ್ಮನಾದಳು......

ಹಾಗೆ ಯೊಚಿಸುತ್ತ ನಿದ್ರೆಗೆ ಹೋದಳು.......... ಅವಳಿಗೆ ಎಚ್ಚರವಾಗಿದ್ದು ಯಾರೋ ಬಾಗಿಲು ಬಡಿದಾಗ....... ಆನಂತರ ಎದ್ದು ಸರಸರನೇ ಬಾಗಿಲು ತೆರೆದು... ನೋಡುತ್ತಾಳೆ ಅವಳಮ್ಮ ಏಕೆ ಏನಾಯಿತು ಎಂದು ಮೈಮುಟ್ಟುನೋಡುತ್ತಾರೆ ಜ್ವರ ಬಂದಾ ಹಾಗೆ ಕಂಡು ಅಮ್ಮ ಸಾಂತ್ವಾನ ಮಾಡುತ್ತ ತಿನ್ನಲು ಹೇಳುತ್ತಾರೆ.........ಇವಳಿಗೆ ತಿನ್ನುವ ಮನಸ್ಸಿಲ್ಲದಿದ್ದರು..........ತಿನ್ನಲೇಬೇಕಾಯಿತು... ಜ್ವರಕ್ಕೆ ಮಾತ್ರೆ ತೆಗೆದುಕೊಂಡು ಮತ್ತೆ ರೊಮ್ ಸೇರಿದಳು ಮರುದಿನ ಭಾನುವಾರವಾದ್ದರಿಂದ ಕಾಲೇಜ್ ಹೋಗೋ ತೊಂದರೆ ಇರಲಿಲ್ಲ ... ಅಂದು ಅದೇ ಭಯ ಯೋಚನೆಯಲ್ಲೆ ಮುಳುಗಿದ್ದಳು ಮನೆಯವರಿಗೆಲ್ಲ ಜ್ವರ ಅದಕ್ಕೆ ಹಾಗಿದ್ದಾಳೆ ಎಂದು ಸುಮ್ಮನಾದರು ಇನ್ನು ಭಾನುವಾರ ಮಧ್ಯಾಹಃದ ಹೊತ್ತಿಗೆ ಜ್ವರ ವಿಪರೀತವಾಗಿ ಅವಳು ಏದ್ದೇಳಲು ತ್ರಾಣವಿಲ್ಲದಾದಳು........... ಇನ್ನು ಅಮ್ಮನಿಗೆ ಗಾಬರಿ ಮನೆಯಲ್ಲಿ ಯಾಕೆ ಎನಾಯಿತು ಹೀಗೆ ಇದ್ದಕ್ಕಿದ್ದ ಹಾಗೆ ಹೀಗಾಯಿತು ಎಂದರೆ ಅವಳಲ್ಲಿ ಉತ್ತರವಿರಲಿಲ್ಲಾ....... ಆಗಲು ಮಾತ್ರೆ ಕೊಟ್ಟು ಸುಮ್ಮನಾದ ಮನೆಯವರು ಸಂಜೆಯಾಗುತ್ತಲಿದ್ದಂತೆ ಹೆಚ್ಚಾದ ಜ್ವರಕ್ಕೆ ಆಸ್ಪತ್ರೆಗೆ ಹೋಗಿ ಡಾಕ್ಟರ್ ಗೆ ಮೊರೆ ಹೋಗದಿರಲಾಗಲಿಲ್ಲ...... ಸರಿ ಇನ್ನು ಅಲ್ಲಿ ಇವಳ ನೋಡಿದ ಕೂಡಲೇ ಡಾಕ್ಟರ್ ಪ್ರಶ್ನೆ ಏನಮ್ಮ ಎಲ್ಲಾದರು ಹೆದರಿದ್ದ ಏನಾಯಿತೆಂದು ಕೇಳಲಾರಂಬಿಸಿದರು...... ಇವಳಿಗೆ ತಿಳಿದೆನೋ? ವೈದ್ಯರಲ್ಲಿ ಸುಳ್ಳು ಹೇಳಬಾರದೆಂದು ಆದರು..... ಇಲ್ಲ ಆ ತರ ಏನು ಇಲ್ಲ ಅಂತ ಸುಳ್ಳೇ ಹೇಳಿದ್ದಳು......... ಅವರ ತಪಾಸಣೆ ನಂತರ ಹೇಳಿದರು ಇಂದು ಇವಳು ಇಲ್ಲೆ ಉಳಿಯಲಿ ಡ್ರಿಪ್ಸ್ ಹಾಕಬೇಕು ಎಂದು ಆಗಾಗಲೇ ಅವಳು ತುಂಬ ಸೊರಗಿದ್ದಳೊ ಕೊಡ......ಇನ್ನು ಇವಳಿಗೆ ಖುಷಿ ಸ್ವಲ್ಪ ದಿನ ಆದರು ಅವನಿಗೆ ಉತ್ತರ ಹೇಳೊದರಿಂದ ತಪ್ಪಿಸಿಕೊಂಡೆ ಎಂದು.......ಆಹಾ....ಆಹಾ.... ೩,೪ ದಿನ ಆಸ್ಪತ್ರೆಯಲ್ಲೇ ಉಳಿಯೋ ಹಾಗೆ ಆಯ್ತು.....ಇನು ೪ನೆ ದಿನ ಮನೆಗೆ ಬಂದಾಗ ಎಲ್ಲರಿಂದ ಸಾಂತ್ವಾನ ಆರೈಕೆ ಎಲ್ಲವೊ ಎಷ್ಟೆ ಆದರು ಅವಳು ಮನೆಮಂದಿಗೆಲ್ಲ ಪ್ರೀತಿಪಾತ್ರಳು...

ಮರುದಿನ ಅಮ್ಮ ಕಾಲೇಜ್ ಗೆ ಹೋಗುವುದುಬೇಡ ಮುಂದಿನ ವಾರದಿಂದ ಹೋಗು ಎಂದರು ಇವಳಿಗು ಅದೆ ಬೇಕಾದದ್ದು.........ಕೊನೆ ಒಂದಲ್ಲ ಒಂದು ದಿನ ಕಾಲೇಜ್ ಗೆ ಹೋಗಲೆ ಬೇಕಲ್ಲವೇ..? ಅಂದು ಬೆಳ್ಳಿಗ್ಗೆ ಅಮ್ಮ ಹೊರಡು ಅಂದರು ಇವಳಿಗೆ ಭಯ ಅಮ್ಮ ನಾನು ಹೋಗಲ್ಲ ಎಂದು ಒಂದೇ ಹಠ.. ಯಾಕೆಂದರೆ ಅಲ್ಲಿ ಜಾಸ್ತಿ ಹುಡುಗರಮ್ಮ ನನ್ನಗೆ ಭಯ ಆಗುತ್ತೆ ಅಂದೆ ನಿಮ್ಮ ಅಣ್ಣ ಬಿಡ್ತಾನೆ ಹೋಗು ...... ಹುಡುಗರು ಇದ್ರೆ ಏನು ಮಾಡ್ತಾರೆ ನಿನ್ನ ತಿಂತಾರ ನಿನ್ನ ಪಾಡಿಗೆ ನೀನಿರು ಅಂತ ಗದರಿದರು... ಆಗಲೇ ಅಳು ಪ್ರಾರಂಭ ಆಯ್ತು..... ಮತ್ತೆ ಸಮಾದಾನ ಮಾಡುತ್ತ ಅವಳ ಅಣ್ಣನ್ನ ಮತ್ತೆ ಅಪ್ಪನ ಜೊತೆ ಮಾಡಿ ಕಾಲೇಜಿಗೆ ಸಾಗಾಕಿದರು ಅಂದು ಅವಳು ಹೆದರುತ್ತಲೇ ಹೋದಳು... ಇನ್ನು ಕಾಲೇಜ್ ಆವಾರಣ ಅವಳಲ್ಲಿ ಇನ್ನು ಭಯ ಮೊಡಿಸಿತ್ತು ನೇರವಾಗಿ ಪ್ರಿನ್ಸಿಪಾಲರಲ್ಲಿಗೆ ಹೋಗುತಿದ್ದ ಹಾಗೆ ಅವ್ರು ಅವಳ ತಂದೆಯೊಂದಿಗೆ ಮಾತನಾಡಿ ಏನು ಯೊಚಿಸಬೇಡಿ ಎಲ್ಲವು ಸರಿಹೋಗುತ್ತೆ ಅವಳಿಗೆ ಹೊಸದಲ್ಲವಾ ಹಾಗೆ ಹೆದರಿಬೇಕು ಎಂದರು........ ಅವಳನ್ನೇನೋ ಬಿಟ್ಟು ಹೊರಟರು ಅಷ್ಟರಲ್ಲಿ ಅಲ್ಲಿಯೇ ಇದ್ದ ಕಾಲೇಜ್ ಗುಮಾಸ್ತ ಪ್ರಿನ್ಸಿಪಾಲರಿಗೆ ಇವಳ ಹಗರಣ ಹೇಳಿಬಿಟ್ಟ ನಂತರ ಮತ್ತೆ ಅವಳನ್ನ ಕರೆಸಿ ಓಹ್ ಹೀಗ ವಿಷಯ ಹೆದರಬೇಡ ಎಂದು ಹೇಳಿ ಅವಳಿಗೆ ಸಮಾಧಾನ ಮಾಡಿ ಕಳಿಸಿದರು, ನಂತರ ಆ ಹುಡುಗನನ್ನು ಕರೆಸಿ ಬುದ್ದಿಮಾತು ಹೇಳಿಕಳಿಸಿದ್ದರು............ಅದೇ ಕೊನೆ ಆ ಹುಡುಗಿಯೂಂದಿಗೆ ಮಾತಿಲ್ಲ ಕತೆ ಇಲ್ಲ ಜೊತೆಗೆ ಅವನು ಕೊಟ್ಟ ಪತ್ರಕ್ಕೆ ಉತ್ತರವೊ ಕೇಳಿಲ್ಲ.........

ಅಲ್ಲಿಂದ ಆಚೆಗೆ ಆ ಹುಡುಗಿ ಕಾಲೇಜಿಗೆ ಬಂದರೆ ಸಾಕು ಅಲ್ಲಿಯೆ ನೆರೆದಿದ್ದ ಹುಡುಗರು ಸುರೇಶ್ ಬಂದ , ಸುರೇಶ ಏನೋ ಸಮಾಚಾರ, ಸುರೇಶ್ ಭಯ ಆಗಿ ಕಾಲೇಜಿಗೆ ಬರಲೇ ಇಲ್ಲವಲ್ಲೊ ಅನ್ನಲು ಪ್ರಾರಂಭಿಸಿದರು......ಇದು ತಡೆಯಲಾಗದ ಅವಳು ಅವಳ ಎಲೆಕ್ಟ್ರಾನಿಕ್ಸ್ ಬ್ರಾಚ್ ಬಿಟ್ಟು ಕಂಪ್ಯೊಟರ್ ಬ್ರಾಚ್ ಗೆ ಹೋದಳು ಏಕೆಂದರೆ ಅಲ್ಲಿ ಸ್ವಲ್ಪ ಹುಡುಗಿಯರಿದ್ದರು.... ಏನು ತೊಂದರೆ ಇರುವುದಿಲ್ಲವೆಂದು.......

ಅದು ಹುಚುಕೋಡಿ ಮನಸು ಅದು ಅದಿನಾರರ ವಯಸು.......... ತನ್ನ ಭಯಕ್ಕೆ ಏನೆಲ್ಲಾ ಸಮಜಾಯಿಶಿ ಕೊಟ್ಟು ... ಹೆದರಿ ನೀರಾಗಿದ್ದಳು... ನೀರೆ..........

2 ಕಾಮೆಂಟ್‌ಗಳು:

 1. ನೀವು ಮೊದಲೇ ಹೇಳಿದಂತೆ ಇದು ಒಂದು ಕಾಲ್ಪನಿಕ ಕಥೆಯೇ ಸರಿ ಏಕೆಂದರೆ ವಾಸ್ತವದಲ್ಲಿ ವರ್ತಮಾನದ ಹೆಣ್ಣುಮಕ್ಕಳನ್ನ ನೋಡಿ ಬೆರೆಯವರು ನಾಚುವಂತ ಪರಿಸ್ತಿತಿ ನಿರ್ಮಾಣವಾಗಿದೆ.
  ಆದರೆ ಮುಗ್ದ ಹೆಣ್ಣು ಮಗಳ ಮಾನಸಿಕ ತೊಳಲಾಟವನ್ನ ಸುಂದರವಾಗಿ ಚಿತ್ರಿಸಿದ್ದೀರ.
  ಈಗ ಆ "ನೀರೆ" ಏನು ಮಾಡುತ್ತಿರಬಹುದು?

  ಪ್ರತ್ಯುತ್ತರಅಳಿಸಿ
 2. ಮನಸಿನ ಮತ್ತೊಂದು ಮನಸು ಇವತ್ತೇ ನೋಡಿದ್ದು..
  ನಿಮ್ಮ ಅನ್ನಿಸಿಕೆಗಳು..ಯೋಚನಾ ಲಹರಿ ಮತ್ತು ಅಂದುಕೊಂಡದ್ದಕ್ಕೆ ಅಕ್ಷರ ರೂಪಕೊಟ್ಟು ಲೇಖನದಲ್ಲಿ ಓದಿಕೊಂಡು ಹೋಗಬಲ್ಲ ಶೈಲಿಯನ್ನೂ
  ನಿಮ್ಮ ಕವನಗಳಷ್ಟೇ ಸಮರ್ಪಕವಾಗಿ ಮೂಡಿಸುತ್ತಿದ್ದೀರಿ...ಭಲೇ ಎನ್ನದೇ..ಇರಲಾರೆ..Keep it up..

  ಪ್ರತ್ಯುತ್ತರಅಳಿಸಿ