ಬುಧವಾರ, ಮಾರ್ಚ್ 4, 2009

ಅಕ್ಕನ ವಚನಗಳು...

ಕದಳಿಯ ಕರ್ಪೂರ ಉಡುತಡಿಯ ಶ್ರೀ ಅಕ್ಕಮಹಾದೇವಿಯ ಅಮೃತವಾಣಿ...ನಿಮ್ಮೊಂದಿಗೆ ಹಂಚಿಕೂಳ್ಳುವಾಸೆ...

೧. ದೇವಸಾನ್ನಿಧ್ಯ
ವನವೆಲ್ಲ ನೀವೆ ವನದೊಳಗಣ ತಿರುವೆಲ್ಲ ನೀವೆ
ತರುವಿನೊಳಗಾಡುವ ಖಗಮೃಗವೆಲ್ಲ ನೀವೆ
ಚೆನ್ನಮಲ್ಲಿಕಾರ್ಜುನ ಸರ್ವಭರಿತನಾಗಿ ಎನಗೆ ಮುಖದೋರು

**ಚೆನ್ನಮಲ್ಲಿಕಾರ್ಜುನನೇ ನೀನು ವಿಶ್ವಮಯನು ವನ ಹಾಗೂ ವನದೊಳಗಿನ ಸರ್ವ ಜೀವಿಗೂ ನೀನೆ ಸ್ವಾಮಿಯು, ತೃಣಕಾಷ್ಟಾದಿಗಳಲ್ಲಿಯೂ ನೀನಿರುವಿ. ನೀನು ಇಲ್ಲದಿರುವ ವಸ್ತುಗಳು ನನಗೆ ಬೇಡ ಆ ಶಿವನ ಸಾನಿಧ್ಯವೇ ಲೇಸು ಎಂದು ಅಕ್ಕನವರು ಎನೆಲ್ಲಾ ಬಯಸಿದ್ದಾರೆ**

೨. ಶಿವತತ್ವ
ಅರಿವೆನೆಂದರೆ ಅರಿಯಬಾರದು ನೋಡಾ
ಘನಕ್ಕೆ ಘನ ತಾ ನೋಡಾ
ಚೆನ್ನಮಲ್ಲಿಕರ್ಜುನ ನಿರ್ಣಯವಿಲ್ಲದೆಪೋದೆನು

**ವಿಶ್ವಮಯನಾದ ಸರ್ವೇಶ್ವರನು ಎಲ್ಲ ಶಕ್ತಿಗಳಿಗಿಂತಲೂ ಅಗಾಧ ಹಾಗು ಶಕ್ತಿಯುಳ್ಳವನು, ಅವನನ್ನು ತಿಳಿಯುವದು ಕಠಿಣ ಅವನನ್ನು ತಿಳಿದೆನೆಂದರೆ ನನ್ನ ಜೀವನ ಧನ್ಯವು**

೩. ದೇವನಿರುವು
ನೀರಕ್ಷೀರದಂತೆ ನೀನಿಪ್ಪಿಯಾಗಿ ಆವುದು ಮುಂದು
ಆವುದು ಹಿಂದು ಎಂದರಿಯೇನು ಕರ್ತೃ
ಆವುದು ಭೃತ್ಯನೆಂದರೆಯೆನು ಆವುದು ಘನ
ಆವುದು ಕಿರಿಯಂದಿರಯನು ಚನ್ನಮಲ್ಲಿಕಾರ್ಜುನ
ನಿನ್ನ ನೂಲಿದುಕೊಂಡಾಡಿದರೆ ಇದುವೆ ರುದ್ರನಾಗದೆ ಹೇಳಯ್ಯ

**ಹಾಲು ನೀರಿನಲ್ಲಿ ಬೆರೆತಂತೆ ನೀನಿರುವಿ, ನೀರು ಹಾಲು ಬೇರೆಯಾಗದೆ ನಿನ್ನನ್ನು ಗುರುತಿಸೆನು. ನಾಮಸ್ಮರಣೆಯಲ್ಲಿ ಸದಾ ಇದ್ದರೆ ಚನ್ನಮಲ್ಲಿಕಾರ್ಜುನ ಮೆಚ್ಚಿದರೆ ಸಣ್ಣ ವಸ್ತುವೂ ಘನತೆಗೇರಬಲ್ಲದು**

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ