ಮಂಗಳವಾರ, ಜನವರಿ 14, 2014

ಸಕ್ಕರೆಯ ಸಂಕ್ರಮಣ

 
ಮೊದಲ ಬಾರಿಗೆ ಸ್ನೇಹಿತೆಯರೊಂದಿಗೆ ಕೂಡಿ ಮಾಡಿದ ಸಕ್ಕರೆ ಅಚ್ಚು... ಅದೇನೋ ಹೇಳ್ತಾರಲ್ಲ ಆಕಾಶಕ್ಕೆ ಮೂರೇ ಗೇಣು ಎನ್ನುವ ಹಾಗೆ ನನಗೆ ಸಿರಿ. ಏನೋ ಆರ್ಕಿಮಿಡಿಸ್ ತರ ಕಂಡುಹಿಡಿದಿದ್ದೇನೆ ಅನ್ನುವ ಹಾಗೆ.

 ಮೊಬೈಲಿನಲ್ಲಿ ತೆಗೆದ ಚಿತ್ರಗಳು... ಸಂಕ್ರಾಂತಿಗೆ ಈ ಬ್ಲಾಗಿಗೆ ಸಿಹಿ ಕೊಡೋಣ ಎಂದು ಕೆಲವು ಪೋಟೋಗಳು ನಿಮ್ಮೊಂದಿಗೆ.

 
 

 

 

 

 

ಸಕ್ಕರೆ ಅಚ್ಚಿನಂತಾ ಸಿಹಿ
ಎಳ್ಳು-ಬೆಲ್ಲದಂತೆ ಬೆರೆಯುವಿಕೆ
ಶೇಂಗಾ-ಕಡಲೆಯಂತಾ ಹೊಂದಾಣಿಕೆ
ಪ್ರತಿ ವರುಷ ಮಿಶ್ರಣಗೈವ
ಸಮೃದ್ಧಿಯ ಸಂಧಿ ಕಾಲ
ಹಿತ-ಮಿತ ಬಾಂಧವ್ಯ ಬೆಸುಗೆಯಲಿ
ಲಾಭ-ನಷ್ಟಗಳ ಸ್ವೀಕರಿಸುವ ಧೈರ್ಯದಲಿ
ಬದುಕು ಸಂಭ್ರಮದ ಸಂಕ್ರಮಣವಾಗಲಿ

 

2 ಕಾಮೆಂಟ್‌ಗಳು: