ಮಂಗಳವಾರ, ಜುಲೈ 8, 2014

ಹಳಿಯ ಹಾದಿ...

ಚಿತ್ರ@ ಮನಸು

ಹಳಿ ತಪ್ಪದ ರೈಲು
ಬೆಸುಗೆ ಬಿಡದ ಜೀವನ
ಕೊನೆಯ ನಿಲ್ದಾಣ ತಲುಪುವುದು
ಇಲ್ಲವೇ
ಬಿರುಕು ಬಿಟ್ಟ ಹಳಿ
ದಿಕ್ಕು ಬದಲಿಸಬಹುದು


ಚಿತ್ರ@ ಮನಸು

ಯಾವ ಬೋಗಿ 
ಯಾವ ಪ್ರಯಾಣಿಕನಿಗೋ
ಮಲಗಿರುವ ರೈಲು 
ಯಾವ ಊರಿಗೋ
ಚಿತ್ರ@ ಮನಸು

ಹಳಿಗಳ ಜಾತ್ರೆಯಲಿ 
ಜನಜಂಗುಳಿಯ ತೇರು ಹೊರಲು
ಸಜ್ಜಾಗಿಹುದೀ ರೈಲುಗಳು
2 ಕಾಮೆಂಟ್‌ಗಳು: